(ಕರ್ನಾಟಕ ಸರ್ಕಾರದ ಐ.ಟಿ-ಬಿ.ಟಿ ಇಲಾಖೆ ಸಹಯೋಗದಲ್ಲಿ ತಂತ್ರಜ್ಞಾನದ ಬಳಕೆ ಮಾಡಿ ಹೊಸ ಚಿಂತನೆ ಮತ್ತು ಆವಿಷ್ಕಾರಗಳ ವಿಶಿಷ್ಟ ನೂತನ ಉದ್ಯಮ ಪ್ರಾರಂಭಿಸಿರುವ ಅರ್ಹ ಪ್ರತಿಭಾವಂತರಿಗೆ ಅನುದಾನ ನೀಡುವ ಯೋಜನೆ)

ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲಾ ಅಭಿವೃದ್ಧಿ ನಿಗಮಗಳ ಪರವಾಗಿ ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮವು 2018-19ನೇ ಸಾಲಿನಲ್ಲಿ “ಉನ್ನತಿ ಯೋಜನೆ” ಯನ್ನು ಅನುಷ್ಟಾನಗೊಳಿಸುತ್ತಿದೆ.

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿ ಪ್ರತಿಭಾವಂತ ಯುವಕ/ಯುವತಿಯರು ಸ್ಟಾರ್ಟ್ಅಪ್ ಉದ್ದಿಮೆಗಳನ್ನು ಆರಂಭಿಸಿದ್ದಲ್ಲಿ ಪ್ರಾರಂಭಿಕ ಆರ್ಥಿಕ ಸಮಸ್ಯೆಗಳಿಗೆ ಬೆಂಬಲವಾಗಿ ಆಯ್ಕೆಯಾಗುವ ಪ್ರತಿ ಅರ್ಹ ಉದ್ಯಮಿಗೆ ರೂ.5.00 ಲಕ್ಷಗಳವರೆಗೆ ಆರ್ಥಿಕ ಸಹಾಯ ಮಾಡುವುದು ಯೋಜನೆಯ ಉದ್ದೇಶವಾಗಿರುತ್ತದೆ.

ಕರ್ನಾಟಕ ಸರ್ಕಾರದ ಐ.ಟಿ-ಬಿ.ಟಿ ಇಲಾಖೆಯಲ್ಲಿ ಈಗಾಗಲೇ ಈ ಯೋಜನೆಯು ಅಸ್ತಿತ್ವದಲ್ಲಿದ್ದು, ಅದೇ ಮಾದರಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಪ್ರತಿಭಾವಂತ ಉದ್ಯಮಿಗಳಿಗೆ ಈ ಯೋಜನೆಯನ್ನು ವಿಸ್ತರಿಸಲಾಗುವುದು.

ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿ ಉನ್ನತ ಮಟ್ಟದ ಮೌಲ್ಯಮಾಪನ ಸಮಿತಿ ಮತ್ತು ಅಂತಿಮ ಆಯ್ಕೆಸಮಿತಿ ಮೂಲಕ ಫಲಾನುಭವಿ ಉದ್ಯಮಿಗಳನ್ನು ಆಯ್ಕೆ ಮಾಡಿ ಸೌಲಭ್ಯ ಒದಗಿಸಲಾಗುವುದು.


ಯೋಜನೆಗಳ ಪೂರ್ಣ ವಿವರ (PDF)