ಪರಿಶಿಷ್ಟ ಜಾತಿಯ ನಿರುದ್ಯೋಗಿಗಳು ಸ್ವಾವಲಂಬಿಗಳಾಗಿ ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲವಾಗುವಂತೆ ನಿಗಮವು ಈ ಕೆಳಕಂಡಂತೆ ಸಾಲಸೌಲಭ್ಯ ಒದಗಿಸುತ್ತಿದೆ.

ಅ) ರೂ.1.00.000/-ದೊಳಗಿನ ಘಟಕ ವೆಚ್ಚಕ್ಕೆ ನಿಗಮದಿಂದ ಶೇ.50ರಷ್ಟು ಗರಿಷ್ಠ ರೂ.35,000/-ಗಳ ಸಹಾಯಧನ ಹಾಗೂ ಉಳಿದ ಮೊತ್ತವನ್ನು ಬ್ಯಾಂಕುಗಳ ಮುಖಾಂತರ ಸಾಲದ ರೂಪದಲ್ಲಿ ಒದಗಿಸಲಾಗುವುದು.

ಆ) ಸ್ವಯಂ ಉದ್ಯೋಗ ಯೋಜನೆಯಡಿ ಘಟಕ ವೆಚ್ಚ ರೂ.2.00 ಲಕ್ಷ ಮೇಲ್ಪಟ್ಟ ಪ್ರಸ್ತಾವನೆಗಳಿಗೆ ಘಟಕ ವೆಚ್ಚದ ಶೇ.33 ಭಾಗ ಅಥವಾ ಗರಿಷ್ಠ ರೂ.1.00ಲಕ್ಷದವರೆಗೆ ಸಹಾಯಧನವನ್ನು ಒದಗಿಸಲಾಗುವುದು.

ಇ) ಕೆಲವೊಂದು ಯೋಜನೆಗಳಿಗೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಹಣಕಾಸು ಹಾಗೂ ಅಭಿವೃದ್ದಿ ನಿಗಮದಿಂದ ಸಾಲ ಪಡೆದು ನೇರವಾಗಿ ಫಲಾನುಭವಿಗಳಿಗೆ ಸಾಲಸೌಲಭ್ಯ ಒದಗಿಸಲಾಗುವುದು. ಘಟಕ ವೆಚ್ಚದಲ್ಲಿ ಶೇ.5ರಷ್ಟು ಭಾಗ ಫಲಾನುಭವಿಯ ಪಾಲು, ಶೇ.20 ಭಾಗ ನಿಗಮದಿಂದ ಅಂಚಿನ ಹಣ(ಗರಿಷ್ಠ ರೂ.1.00ಲಕ್ಷ) ಹಾಗೂ ಉಳಿದ ಶೇ.75 ಭಾಗವನ್ನು ರಾಷ್ಟ್ರೀಯ ಹಣಕಾಸು ಅಭಿವೃದ್ದಿ ನಿಗಮದ ಹಣದಿಂದ ಸಾಲದ ರೂಪದಲ್ಲಿ ಭರಿಸಲಾಗುವುದು.