ಸದರಿ ಯೋಜನೆಯಡಿ ರೂ. 1,00,000/-ದವರೆಗೆ ಸಾಲ ಪಡೆಯುವವರಿಗೆ ನಗರಸಭೆ, ಪುರಸಭೆ, ಪಂಚಾಯತಿಗಳಿಂದ ಸಹಾಯಧನ ಬಿಡುಗಡೆಯಾದ್ದಲ್ಲಿ ಶೇ.50 ಭಾಗ ಸಹಾಯಧನ (ಗರಿಷ್ಠ ಮಿತಿ ರೂ.25,000/-) ಅಥವ ಗರಿಷ್ಠ ರೂ.25,0000/-ಗಳನ್ನು ಪಡೆಯಲು ಅವಕಾಶವಿದೆ.

ಮೇಲಿನ ಸಂಸ್ಥೆಗಳಿಂದ ಸಹಾಯಧನ ಬಿಡುಗಡೆಯಾದಲ್ಲಿ, ವಿಶೇಷ ಕೇಂದ್ರದ ಸಹಾಯಧನದಲ್ಲಿ ರೂ.25.000/-ಗಳ ಸಹಾಯಧನವನ್ನು ಬಿಡುಗಡೆ ಮಾಡಲಾಗುವುದು.

ಉಳಿದ ಮೊತ್ತ ಬ್ಯಾಂಕ್/ಎನ್.ಎಸ್.ಕೆ.ಎಫ್.ಡಿ.ಸಿ. ಅವಧಿಸಾಲವಾಗಿರುತ್ತದೆ. ರೂ.1,00,000/-ಕ್ಕಿಂತ ಹೆಚ್ಚಿನ ಮೊತ್ತದ ಸಾಲ ಪಡೆಯುವವರಿಗೆ 90% ಬ್ಯಾಂಕ್/ಎನ್.ಎಸ್.ಕೆ.ಎಫ್.ಡಿ.ಸಿ. ಅವಧಿಸಾಲ ಮತ್ತು ಶೇಕಡಾ 5 ಭಾಗ ಅಂಚಿನ ಹಣದ ಸಾಲ ನೀಡಲಾಗುವುದು.

ಉಳಿಕೆ 5 ಭಾಗವನ್ನು ಪ್ರವರ್ತಕರು ಭರಿಸಬೇಕಾಗುವುದು. ಸದರಿ ಯೋಜನೆಯಡಿ ರೂ.25,000/-ದವರೆಗಿನ ಸಾಲಕ್ಕೆ ಶೇ.5ರ ಬಡ್ಡಿ ಹಾಗೂ ರೂ.25,000/-ಕ್ಕಿಂತ ಹೆಚ್ಚಿನ ಮೊತ್ತದ ಸಾಲಕ್ಕೆ ಶೇ.6ರ ಬಡ್ಡಿ ಇರುತ್ತದೆ.