ಈ ಯೋಜನೆಯನ್ನು ರಾಷ್ಟ್ರೀಯ ಪರಿಶಿಷ್ಟ ಜಾತಿ ಹಣಕಾಸು ಹಾಗೂ ಅಭಿವೃದ್ದಿ ನಿಗಮದ ಸಹಯೋಗದೊಂದಿಗೆ ಅನುಷ್ಟಾನಗೊಳಿಸಲಾಗುತ್ತಿದೆ.

ಘಟಕ ವೆಚ್ಚ ಗರಿಷ್ಠ ಮೊತ್ತ ರೂ.25,000/-ವಾಗಿದ್ದು, ಇದರಲ್ಲಿ ರೂ.15,000/- ಎನ್.ಎಸ್.ಸಿ.ಎಫ್.ಡಿ.ಸಿ.ಯವರ ಅವಧಿಸಾಲವಾಗಿರುತ್ತದೆ.

ಅವಧಿಸಾಲಕ್ಕೆ ಶೇ.5ರಷ್ಟು ಬಡ್ಡಿಯನ್ನು ವಿಧಿಸಲಾಗುವುದು. ಉಳಿದ ರೂ.10,000/- ಜಿಲ್ಲಾ ಪಂಚಾಯತ್, ನಗರಾಭಿವೃದ್ದಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಿಶೇಷ ಘಟಕ ಯೋಜನೆಯಡಿ ಇತರೆ ಇಲಾಖೆಗಳಲ್ಲಿ ಲಭ್ಯವಿರುವ ಸಹಾಯಧನವನ್ನು ಪಡೆದು ಅನುಷ್ಟಾನಗೊಳಿಸಲಾಗುವುದು.

ಸ್ವ-ಸಹಾಯ ಸಂಘದ ಸದಸ್ಯರುಗಳು ಹಾಗೂ ವೈಯಕ್ತಿಕ ಫಲಾಪೇಕ್ಷಿಗಳಿಗೆ ಸಣ್ಣಪ್ರಮಾಣದ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಸೌಲಭ್ಯವನ್ನು ಒದಗಿಸಲಾಗುವುದು.