Language(ಭಾಷೆ)
  
 
ಸಂದೇಶ
     1975ರಲ್ಲಿ ನಿಗಮವು ಪ್ರಾರಂಭವಾಗಿದ್ದು, ಪರಿಶಿಷ್ಠ ಜಾತಿಯವರ ಶ್ರೇಯೋಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಕಳೆದ ಹಲವಾರು ವರ್ಷಗಳಲ್ಲಿ ಹಂತ ಹಂತವಾಗಿ ವಿವಿಧ ಯೋಜನೆಗಳು ಸೇರ್ಪಡೆಯಾಗಿ, ಕರ್ನಾಟಕ ಸರಕಾರದ ಪ್ರಸ್ತುತ 5 ಪ್ರಮುಖ ಯೋಜನೆಗಳನ್ನು ಪರಿಶಿಷ್ಠ ಜಾತಿಯವರ ಆರ್ಥಿಕ ಸಬಲೀಕರಣಕ್ಕಾಗಿ ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆಗಳ ಫಲವನ್ನು ಸಮರ್ಪಕವಾಗಿ ಹಾಗೂ ಶೀಘ್ರವಾಗಿ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಅನಿವಾರ್ಯವಾಗಿರುವುದನ್ನು ಮನಗಂಡು ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್.ಐ.ಸಿ) ಸಹಯೋಗದೊಡನೆ ಅಂತರ್ಜಾಲ ಆಧಾರಿತ ಆನ್-ಲೈನ್ ಸಾಫ್ಟ್-ವೇರ್ ತಯಾರಿಸಿ ಅಭಿವೃದ್ಧಿ ಪಡಿಸಲಾಗಿದೆ.

     2013-14ನೇ ಸಾಲಿನಿಂದ ಈ ತಂತ್ರಜ್ಞಾನವನ್ನು ಯೋಜನೆ ನಿರೂಪಣೆ ಹಾಗೂ ಮೇಲ್ಪಿಚಾರಣೆ ಮಾಡಲು ಉಪಯೋಗಿಸಿಕೊಳ್ಳಬಹುದಾಗಿದೆ. ಅಲ್ಲದೇ ಫಲಾನುಭವಿಗಳು, ಗುತ್ತಿಗೆದಾರರು, ವಿದ್ಯುತ್ ಸರಬರಾಜು ಕಂಪನಿಗಳು, ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ನಿಗಮದ ದಿನನಿತ್ಯದ ಆಡಳಿತಾತ್ಮಕ ಅನುಕೂಲಕ್ಕಾಗಿ ಬಳಸಿಕೊಳ್ಳಬಹುದಾಗಿದೆ. ಈ ಸಾಫ್ಟ್-ವೇರ್ ಬಳಕೆಯಿಂದ ನಿಗಮದ ಕೆಲಸಗಳನ್ನು ನಿರ್ವಹಿಸುವಲ್ಲಿ ಇನ್ನಷ್ಟು ಚೇತೋಹಾರಿಯಾಗಲಿ ಎಂದು ಆಶಿಸುತ್ತೇನೆ.
                                                                                                                                                                         
                                                                                                                                                                               ಅಧ್ಯಕ್ಷರು
                                                                                                                                                     ಡಾ:ಬಿ.ಅರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ (ನಿ)  

Version 1.0.2
Designed and Developed by National Informatics Centre (Karnataka State Unit).
Skip Navigation Links.